ಬುದ್ಧಿಯು ಸ್ಥಿರವಾದದ್ದು. ಭಾವನೆಗಳನ್ನು ಕ್ಷಣಿಕವಾದದ್ದು. ಆದರೆ ಕೆಲವೊಮ್ಮೆ ಭಾವನೆಗಳು ಬುದ್ಧಿಯ ಮೇಲೆ ಮೇಲುಗೈ ಸಾಧಿಸುತ್ತದೆ.
ಅಚಲವೆನಿಸಿದ ಹಿಮಾಚಲವೂ ಅದುರುವುದಿದೆ. ಹಾಗೆನಿಸುವಾಗ ಮಾನವನೇನು. ಶಿಲೆಯು ಕರುಗುವುದು ಸಾಮಾನ್ಯ ಸಂಗತಿಯಲ್ಲ. ಹಾಗೆಂದು ಅದು ಅಸಂಭವನೀಯವಂತೂ ಅಲ್ಲ...
ಕೆಲವು ಘಟನೆಗಳು ದೈವ ಇಚ್ಚೆಯಂತೆಯೇ ನಡೆಯುತ್ತದೆ. ಅದು ನಮ್ಮೊಳಗಿನ ಶಿಲೆಯನ್ನೂ ಕರಗಿಸಿ ಬಿಡುತ್ತದೆ. ನಮ್ಮ ಅರಿವಿಲ್ಲದೆಯೇ ದೇವರ ಕೈಯೊಂದು ನಮ್ಮನ್ನು ಮುನ್ನಡೆಸುತ್ತದೆ. ಅನಿರೀಕ್ಷಿತ ಸಂದರ್ಭದಲ್ಲಿ ನಮ್ಮನ್ನು ಸುರಕ್ಷಿತವಾಗಿಸುತ್ತದೆ. ಒಂದು comfort zone ಅನ್ನು ಕಟ್ಟಿಕೊಡುತ್ತದೆ. ಬಹುಶಃ ಆ ದೈವಿಕ ಅನುಭೂತಿಯನ್ನು ಪಡೆಯಲು ತಾನು ಅರ್ಹನೇ ಎಂಬ ಪ್ರಶ್ನೆಯನ್ನು ಬುದ್ಧಿಯು ಕೇಳುತ್ತಿರುತ್ತದೆ... ಒಲಿದ ಯಾವ ಶಕ್ತಿಯೂ ಶಾಶ್ವತವಾಗಿ ನಮ್ಮಲ್ಲಿ ಉಳಿಯದು ಎಂಬ ವಾಸ್ತವ ಬಹುಶಃ ಸದಾ ನಮ್ಮ ಮನಸ್ಸಿನಲ್ಲಿ ಇರಬಹುದು. ಇದೆ. ಇತ್ತು. ಅದರೆ ಪೂರ್ವಜನ್ಮದ ಪುಣ್ಯದ ಗಂಟು ಕರಗಿದಾಗ ಒಲಿದ ದೈವಶಕ್ತಿಯು ದೂರವಾಗುತ್ತದೆ. ಅಥವಾ ಅದನ್ನು ಉಳಿಸಿಕೊಳ್ಳದಿರುವುದು ಅನಿವಾರ್ಯವಾಗ್ತದೆ. ಬುದ್ದಿ ಮತ್ತು ಪ್ರಜ್ಞೆ ಸಕ್ರಿಯವಾಗಿದ್ದರೂ ಮನಸ್ಸು ಪ್ರಕ್ಷುಬ್ಧವಾಗುತ್ತದೆ. ಪುಣ್ಯದ ಗಂಟಿನಲ್ಲಿ ಮನತುಂಬಿದ ನೋವು ಸಂಚಿತವಾಗ್ತದೆ. ಎಲ್ಲವೂ ವಿಧಿಲಿಖಿತ. ಪರಮಾತ್ಮನ ಮಾಯೆ.
ಸಂಭ್ರಮದಲ್ಲಿ ನಲಿದು, ದುಃಖದಲ್ಲಿ ಅತ್ತವರು ಹಲವರು...
ಸುಖದಲ್ಲಿ ಸಂಭ್ರಮಿಸದೆ, ದುಃಖವ ತೋರ್ಪಡಿಸದೆ ಕಠಿಣ ಶಿಲೆಗಳಾದವರು ಇನ್ನು ಕೆಲವರು...
ಎಲ್ಲಾ ನಿರೀಕ್ಷಿತ. ಆದರೂ ಅನಿರೀಕ್ಷಿತ.
ಯಾಕೆ ಹೀಗೆ..?
---------
ಕಳೆದ ಕ್ಷಣವನು
ಪಡೆದ ಋಣವನು
ಎಡವಿದೆಡೆಯನು
ಮರೆಸದಿರು ಗುರುವೇ
ಎಡವಿತೋ...
ಕಣ್ಕೆಡಿಸಿತೋ...
ಅದು ನಿರೀಕ್ಷಿತ...
ಆದರೂ ಅನಿರೀಕ್ಷಿತ.🙂
ಮಂದಹಾಸದ
ಹಿಂದಡಗಿಹುವುದೇನು?
ಗುರುಲಿಖಿತ ಸ್ಥಿರಚಿತ್ಥದಿ
ಸ್ಥಿರಭಾವದಿ ನಿಟ್ಟುಸಿರು
|| ಅಭಿಜಿತ್.ಕೆ.ಜೆ ||


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ