ಕಳೆದ ಕೆಲವು ದಿನಗಳಿಂದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ರಾಜಧಾನಿ ನಗರಿ ದೆಹಲಿಯ ಜಂಥರ್ ಮಂಥರ್ನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪ್ರತಿಭಟನೆಯ ಧ್ಯೇಯ ಉದ್ದೇಶಗಳು ಮರೆತವೋ ಎನ್ನುವಂತೆ ಪ್ರತಿಭಟನೆಗಾರರು ಪಾರ್ಲಿಮೆಂಟ್ನತ್ತ ಮಾರ್ಚ್ ಮಾಡಲು ಪ್ರಯತ್ನ ಮಾಡಿದರು. ಪ್ರತಿಭಟನಾಕಾರರು ಪಾರ್ಲಿಮೆಂಟ್ ಮಂದಿರದ ಸುರಕ್ಷಿತ ವಲಯವನ್ನು ಪ್ರವೇಶಿದಂತೆ ತಡೆಯಲು ದೆಹಲಿ ಪೋಲೀಸರು ಬ್ಯಾರಿಕೇಡ್ನಿಂದ ತಡೆ ಒಡ್ಡಿದರು. ಪ್ರತಿಭಟನಾಗಾರರು ಬ್ಯಾರಿಕೇಡ್ ದಾಟಿ ಮುಂದುವರಿದಾಗ ಪೋಲಿಸರು ಲಾಠಿ ಚಾರ್ಜ್ ಮಾಡಿದರು. ಸಂಘರ್ಷ ತೀವ್ರವಾದಾಗ ಕೇಂದ್ರ ಮೀಸಲು ಪೋಲಿಸ್ ಪಡೆ (CRPF) ಮಧ್ಯಪ್ರವೇಶಿಸಿತು. ಈ ಹಂತದಲ್ಲಿ CRPF ಯೋಧರಲ್ಲಿ ಕೆಲವರು ಅವರಿಗೆ ಅಧಿಕೃತವಾಗಿ ನೀಡಲಾಗಿದ್ದ Pellet Gun (ಮರಣ ಕಾರಕವಲ್ಲದ ಆಯುಧ) ಬಳಸಿ ಸಂಘರ್ಷ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ನಂತರದ ದಿನಗಳಲ್ಲಿ Pellet Gun ಬಳಕೆ ಮಾಡಿದ CRPF ಯೋಧರ ಮೇಲೆ ಕ್ರಿಮಿನಲ್ ಮೊಕದ್ದಮೆ (Case) ಹಾಕಬೇಕೆಂಬ ಮಾತು ಕೇಳಿಬಂದವು. ದೆಹಲಿ ಪೋಲಿಸ್ ಅಂತಿಮವಾಗಿ ಮೊಕದ್ದಮೆಯನ್ನು ಹಾಕಿತು. ಆ ಯೋಧನು ತನ್ನ ಕರ್ತವ್ಯದಲ್ಲಿ ಇರುವಾಗ ಅವನು ಸಾಮಾನ್ಯ ಪ್ರಜೆಯಲ್ಲ. ಅವನು ತನ್ನ ಮೇಲೆ ಇರುವ ಜವಾಬ್ದಾರಿಯನ್ನು, ಪರಿಸ್ಥಿತಿಯನ್ನು ಅವಲೋಕಿಸಿ ವಿವೇಚನೆಗೆ ಯುಕ್ತವಾಗಿ ಹಾಗೂ ತನ್ನ ಅಧಿಕಾರ ಪರಿಧಿಯಲ್ಲಿ ಬಳಸಬೇಕಾಗುತ್ತದೆ. ಆತ ಕೈಗೊಂಡ ತೀರ್ಮಾನದ ಫಲ ಕೆಲವೊಮ್ಮೆ ರಾಜಕೀಯವಾಗಿ ತಪ್ಪಾಗಬಹುದು ಅಥವಾ ಸರಿಯಾಗಬಹುದು. ಅದು ಆತನ ಚಿಂತೆಯಲ್ಲ, ಚಿಂತೆಯಾಗಬಾರದು. ಕೆಲವೊಮ್ಮೆ ಆ ಪ್ರತಿಭಟನೆಯನ್ನು ಆತನ ಮಗ ಅಥವಾ ಮಗಳು ಇರಬಹುದು. ಆದರೆ ಒಬ್ಬ ಯೋಧನಿಗೆ ಸೇವೆ ಮೊದಲು. ಹೀಗಿರುವ ಅಂತಹ ಯೋಧರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕುವ ವಿಚಾರ ಅವರ ಆತ್ಮಸ್ಥೈರ್ಯ ಕುಗ್ಗಿಸುವಂತಹದ್ದು. ಮುಂದಿನ ದಿನಗಳಲ್ಲಿ ಆತ ಯಾವುದೇ ವಿಷಯದಲ್ಲಿ ರಾಜಕೀಯ ಪರಿಣಾಮ ಯೋಚಿಸಿ ಕೆಲಸ ಮಾಡುವಂತೆ ಆಗಬಾರದು. ಹೀಗಿರುವಾಗ CRPF ನ ಡೈರೆಕ್ಟರ್ ಜೆನೆರಲ್ ಜಿ.ಪಿ. ಸಿಂಗ್ ಅವರು ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ತುಂಬಾ ಪ್ರಸ್ತುತವಾದದ್ದು. CRPF ನ ಮುಖ್ಯಸ್ಥನಾಗಿ ಆ ಘಟನೆಯ ಜವಾಬ್ದಾರಿ ಸಂಪೂರ್ಣ ತನ್ನದು ಎಂದು ಹೇಳಿದರು. ಕ್ರಿಮಿನಲ್ ಮೊಕದ್ದಮೆ ಹೂಡುವುದಾದರೆ ಮೊದಲಿಗೆ ನನ್ನ ಮೇಲೆ ಪ್ರಕರಣ ದಾಖಲಾಗಲಿ, CRPF ವತಿಯಿಂದ ಯಾವುದೇ ಯೋಧನ ಮೇಲೆ ಪೋಲಿಸ್ ವಿಚಾರಣೆಗೆ ಅನುಮತಿ ನೀಡುವುದಿಲ್ಲ ಎಂದು ಆಡಳಿತ ಮತ್ತು ವಿರೋಧ ಪಕ್ಷಗಳ ರಾಜಕೀಯದಿಂದ ದೂರ ನಿಂತರು. ಸ್ವತಃ ಆಡಳಿತಾರೂಢ ಘನ ಸರಕಾರವೇ ಪ್ರತಿಭಟನೆಗಾರರ ಮುಂದೆ ತಲೆತಗ್ಗಿಸಿದರೂ ತಾನು ನಂಬಿದ ಆದರ್ಶಗಳನ್ನು, ಸೇವೆಯನ್ನು, ಅದಕ್ಕೂ ಮಿಗಿಲಾಗಿ ತಾನು ನೇತೃತ್ವ ನೀಡುವ ಪ್ಯಾರಾಮಿಲಿಟರಿಯ ಸಾಮಾನ್ಯ ಯೋಧರ ಹೆಗಲಿಗೆ ಹೆಗಲಾಗಿ ನಿಂತ ಜಿ.ಪಿ.ಸಿಂಗ್ ಐ.ಎ.ಎಸ್ ರವರಿಗೆ ಬಿಗ್ ಸಲ್ಯೂಟ್...🫡
He is a good civil servant & a leader...
"ಎನ್.ಸಿ.ಸಿಯ ಕ್ಲಾಸ್ನಲ್ಲಿ ಭಾರತೀಯ ಸೈನ್ಯದ ಯೋಧರೊಬ್ಬರು ನಮಗೆ ಪರೇಡ್ನಲ್ಲಿ ಹೇಳಿದ ಮಾತು ನೆನಪಾಯಿತು... ಭಾರತೀಯ ಸೈನಿಕರು ಯುದ್ಧದ ಸಂದರ್ಭದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳನ್ನು ನಂಬಿಕೊಂಡು ನಿಲ್ಲುವುದಿಲ್ಲ. ಬದಲಾಗಿ, ಕಾಶ್ಮೀರದಿಂದ ಅಂಡಮಾನ್ ತನಕದ ಚಳಿ, ಮಳೆ, ಬಿಸಿಲುಗಳ ಮೊದಲಾದ ವಿಪರೀತ, ವಿಭಿನ್ನ ಪರಿಸ್ಥಿತಿಯ ಹವಾಮಾನ, ಹಿಮ - ಮರುಭೂಮಿ, ಸಮತಲ - ಕರಾವಳಿ, ಪರ್ವತ - ಕಣಿವೆ, ಪೀಠಭೂಮಿ - ದ್ವೀಪ ಮೊದಲಾದ ಭೌಗೋಳಿಕ ಪರಿಸ್ಥತಿಯಲ್ಲಿ ಸೇವೆಸಲ್ಲಿಸಿ ಪಡೆದ ಅನುಭವವನ್ನು ನಂಬಿದ್ದಾನೆ ಎಂದು..."
ಬಹುಶಃ ಜಿ.ಪಿ ಸಿಂಗ್ ಅವರ ಸಮಯೋಚಿತ ಪ್ರತಿಕ್ರಿಯೆಯು ಯೋಧರಿಗೆ ಹೊಸ ಧನಾತ್ಮಕ ಅನುಭವವನ್ನು ನೀಡಬಹುದು. ಆಸ್ಪತ್ರೆಯಲ್ಲಿ ಇರುವ ಯೋಧರು ಬೇಗ ಗುಣಮುಖರಾಗಲಿ.
ರಾಜಕೀಯ ಸಂಸ್ಕೃತಿ ಯಾವ ಕ್ಷಣದಲ್ಲೂ ಬದಲಾಗಹುದು... ಆದರೆ ಭಾರತೀಯ ಸೈನ್ಯ ಹಾಗೂ ಪ್ಯಾರಾಮಿಲಿಟರಿ ಪಡೆಗಳು ಎಂದಿಗೂ ತನ್ನ ಧ್ಯೇಯ, ಸಂಸ್ಕೃತಿ ಮರೆಯದು ಎನ್ನುವ ಭರವಸೆ ಮೂಡಿದೆ...
ಜೈ ಹಿಂದ್...
(31/07/2026)


Abhi avare niwu yawa sainikanigu kammi ella ..nimma jeevanadallu enta sainikaranta shistu kanasigtiwe namage...
ಪ್ರತ್ಯುತ್ತರಅಳಿಸಿ😁😁😁😁😁
ಅಳಿಸಿAbhi avre heege eshtu dina mundu varisikondu hogbodu.. omme idella nillisidralla...
ಪ್ರತ್ಯುತ್ತರಅಳಿಸಿಕಾಯ ಅಳಿಯುವ ತನಕ ಮುಂದುವರಿಸಬಹುದು ಅನಿಸ್ತದೆ...😅
ಅಳಿಸಿ